Pages

Thursday, March 10, 2011

ವಿದ್ಯುತ್ ಸಮಸ್ಯೆಗೆ ಸೌರಶಕ್ತಿಯೆ ಪರಿಹಾರ

ದೈನಂದಿನ ಬದುಕಿಗೆ ಅತಿ ಮುಖ್ಯ ವಿದ್ಯುತ್ . ಸಮಸ್ತ ನಾಗರಿಕರಿಗೆ ಮೂಲಭೂತ ವಸತಿ ,ಶಿಕ್ಷಣ ,ಕುಡಿಯುವ ನೀರು, ಪ್ರಾಥಮಿಕ ಅರೋಗ್ಯ ಹಾಗು ಇತರ ಸೌಕರ್ಯ ಗಳ ಜೊತೆಗೆ ವಿದ್ಯುತ್ ಪೂರಿಯಸುವ ಸರಕಾರದ  ಕರ್ತವ್ಯಗಳಲ್ಲೊಂದಾಗಿದೆ. ಇತೀಚಿನ ವರುಷಗಳಲೇ ವಿದ್ಯುತ್ ಇಲ್ಲದೆ ಬೇರೆ ಮೂಲಭೂತ ಸೌಕರ್ಯಗಳನ್ನು ವದಗೀಸುವುದು ಕಷ್ಟವೇನೂ ಅನ್ನುವ ಮಟ್ಟಿಗೆ ತಲುಪಿದೆ , ಏಕೆಂದರೆ ನಮ್ಮ ದಿನ ನಿತ್ಯದ ಎಲ್ಲಾ ಚಟುವಟಿಕೆಗಳು ಮತ್ತು ಕಲ್ಲಇದ್ದಿಲಿನ  ಶಾಕೊತ್ಪನ್ನ  ಕೇಂದ್ರಗಳು, ಅಣುಸ್ಥಾವರಗಳು  ಅನಿಲ ಹಾಗೂ ಕಲ್ಲಣ್ಣೆಯನ್ನು  ಉಪಯೋಗಿಸೀ ವಿದ್ಯುತ್  ಉತ್ಪಾದಿಸಲಾಗುತ್ತಿದೆ  .ಆದೆರೆ ಅವುಗಳು ನಿರೀಕ್ಷಿತ ಪ್ರಮ್ಮಣದಲ್ಲಿ ಲಭ್ಯವಿಲ್ಲದೆ ಇರುವುದಿಂದ ಬೇಡಿಕೆಗೆ ಅನುಗುಣವಾಗಿ ಉತ್ಪಾದನೆ ಸಾಧ್ಯವಾಗುತ್ತಿಲ್ಲ  .

ಈ  ಎಲ್ಲಾ ಮೂಲಗಳು ಒಂದಲ್ಲಾ ಒಂದು ದಿನ ಬರಿದಾಗಲಿದ್ದು ಇoತಹ ಮೂಲಗಳಿಗೆ  ಪರಾಯ್ಯಾಯ ಮಾರ್ಗಗಳು ತಕ್ಷಣದಲ್ಲಿಯೇ  ಕಂಡುಕೊಳ  ಬೇಕಾದ ಪರಿಸ್ಥಿತಿ ಬಂದು ಒದಗಿದೆ .ಇತ್ತಿಚೀನ  ವರ್ಷ ಗಳಲ್ಲಿ ವಿಶ್ವಾದ್ಯಂತ ಪರಿಸರದಲ್ಲಾಗುತ್ತಿರುವ  ಜಾಗತಿಕ ತಾಪಮಾನ ,ಪರಿಸರ ಮಾಲಿನ್ಯ ,ಓಜೊನ್  ಪದರ ತಿಳುವಾಗುತಿರುವುದು ,ಹಸಿರು ಮನೆ ಅನಿಲಗಳ ಪ್ರಮಾಣ ಅದರಲ್ಲೂ ವಿಶೇಷವಾಗಿ  ಇಗಳದ ಡೈ ಆಕ್ಸೈಡ್   ಹೊರಸುಸುವಿಕೆ .ವಾತಾವರಣ ಉಷ್ಣತೆ ಹೆಚ್ಚಳದಿಂದ  ಅಂತರಜಲ ಕಡಿಮೆ ಯಾಗು ತಿರುವುದು .ಕಾಲಕಾಲಕ್ಕೆ ಸರಿಯಾಗಿ ಮಳೆ ಬೀಳದೇ ಇರುವುದು ,ರುತು ಚಕ್ರದಲ್ಲಾದ ಬದಲಾವಣಿ ,ಜೀವ ವೈವಿದ್ಯತೆಯ ನಾಶ ,ಹೆಚ್ಚಾಗುತಿರುವ ರೋಗ -ರಾಜಿನಗಳು  ಎಲ್ಲರನ್ನು  ಚಿಂತಿಸುವ ಮಾಡಿವೆ .

ಇಂದು ಇಂದು ವಿದ್ಯುತ್ ಕ್ಷೇತ್ರ ದಿಂದ ಪರಿಸರ ಮೇಲೆ ಉಂಟಾಗುತ್ತಿರುವ  ದುಷ್ಪರಿಣಾಮಗಳು ತಡೆಗಟ್ಟುವ ದ್ರಷ್ಟಿ ಯಿಂದ  ಹಾಗೂ ವಿದ್ಯುತ್ ಕೊರತೆ ಯನ್ನು  ತುಂಬಲು ನೈಸರ್ಗಿಕಾ ವಾಗಿ ದೊರೆಯುವ ನವೀಕರಿಸ ಬಹುದಾದ ಇoಧನ  ಮೂಲಗಳಾದ  ಪವನಶಕ್ತಿ , ಕಿರುಜಲ ವಿದ್ಯುತ್ ,ಜೈವಿಕ   ವಿದ್ಯುತ್,  ಸೌರ ಶಕ್ತಿ ಹಾಗೂ ಇತರ ನವಿಕರಿಸಬಹುದಾದ  ಇoದನ  ಮೂಲಗಳತ್ತಾ  ಗಮನ ಹರಿಸುವುದು ಅತ್ಯಾವಷಕವಾಗಿದೆ .ಇದರಿಂದ ಹೆಚುತಿರುವ ವಿದ್ಯುತ್ ಬೇಡಿಕೆಯನು ಪುರೈಸುವುದರ ಜೋತೆ -ಜೋತೆಗೆ ಪರಿಸರ ಸಂರಕ್ಷಣೆ  ,ಹವಾಮಾನ ಬದಲಾವಣೆಯ  ನಿಯಂತ್ರಣ ಹಾಗೂ ಪರಿಸರ ಮಾಲಿನ್ಯವನ್ನು ನಿಯಂತ್ರಿಸಬಹುದು .

ಕಳೆದ ವರ್ಷ ಡೆನ್ಮಾರ್ಕ್ ದೇಶದ ಕೊಪೆನ್ ಹೇಗನ್ನಲ್ಲಿ   ಸೇರಿದ್ದ ಜಾಗತಿಕ ಹವಾಮಾನ ಬದಲಾವಣೆ ನಿಯಂತ್ರಣದ ಬಗ್ಗೆ ನಡೆದ ಸಮಾವೇಶದಲ್ಲೂ  ಸಹ ಹವಾಮಾನ ಬದಲಾವಣೆ  ಹಾಗೂ ಜಾಗತಿಕವಾಗಿ  ಹೆಚ್ಚಗುತಿರುವ ವಾತಾವರಣದ  ಉಷ್ಣತೆಯನ್ನು  ನಿಯಂತ್ರಿಸಲು ನವಿಕರಿಸಬಹುದಾದ ಇoಧನ ಮೂಲಗಳಿಂದ ವಿದ್ಯುತ್  ಉತ್ಪಾದಿಸವ ಬಗ್ಗೆ ಒತ್ತು  ನೀಡಲಾಗಿದೆ .ನವಿಕರಿಸಬಹುದಾದ ವಿದ್ಯುತ್ ಉತ್ಪಾದನೆ  ಪರಿಸರಸ್ನೇಹಿ ಸ್ವಶ್ಹ ಅಭಿವೃದ್ಧಿ   ತಂತ್ರಜ್ಞ್ಯಾನದಿಂದ  ಕೂಡಿದ್ದು ,ಇಂತಹ   ವಿದ್ಯುತ್ ಉತ್ಪಾದನೆಗೆ   ಹೆಚ್ಹು ಗಮನಹರಿಸುವುದು  ಅವಶ್ಯಕತೆಗಳೊಂದಾಗಬೇಕಿದೆ  . ಇವು ನೈಸರ್ಗಿಕವಾಗಿ  ಸದಾ ದೊರೆಯುವ   ನವಿಕರಿಸಬಹುದಾದ ಮೂಲಗಳಾದ  ಪವನ ಶಕ್ತಿ  , ಸೌರ ಶಕ್ತಿ ,ಸಣ್ಣ ಪ್ರಮಾಣದ  ಜಲ  ವಿದ್ಯುತ್ ಉತ್ಪಾದನೆ ,ಸಸ್ಯ ಜನ್ಯ ವಿದ್ಯುತ್ ಉತ್ಪಾದನೆ ,ಸಹ ಉತ್ಪಾದನೆ ಗಳಾಗಿದ್ದು , ಬರಿದಾಗದ ಇರುವ ಇoಧನ ಮೂಲಗಳಾಗಿವೆ. 

ನವಿಕರಿಸಬಹುದಾದ ಇoಧನ ಮೂಲಗಳಲ್ಲಿ ಸೂರ್ಯನ ಬೆಳಕು ಎಲ್ಲಾ ಸ್ಥಳಗಳಲ್ಲಿ  ಸುಲಬವಾಗಿ  ದೊರೆಯುವ ಸಾದನ ವಾಗಿದೆ .ಆದರೆ ಇತರೆ ನವಿಕರಿಸಬಹುದಾದ ಇoಧನ ಮೂಲಗಳಾದ ಪವನಶಕ್ತಿ ಮತ್ತು ಕಿರುಜಲ  ಮೂಲಗಳು ಸ್ಥಳ ನಿರ್ದಿಷ್ಟವಾಗಿವೆ.  ಸೂರ್ಯನ ಬೆಳಕನ್ನು ಶಾಕವನ್ನಾಗಿ  ಪರಿವರ್ತಿಸಿ ನೀರನ್ನು ಕಾಯಿಸುವ ತಂತ್ರಜ್ಞ್ಯಾನ  (ಸೋಲಾರ್ ಥೆರ್ಮಲ ) ಮತ್ತೊಂದು  ಸೂರ್ಯನ ಬೆಳಕನ್ನು ವಿದ್ಯುತ್ ಆಗಿ ಪರಿವರ್ತಿಸುವ ತಂತ್ರಜ್ಞ್ಯಾನ  ಸೋಲಾರ್ ಫೋಟೋ ವೋಲ್ಟಾಇಕ  ಎಂದು ರಾಜ್ಯದಲ್ಲಿ ಬಿಸಿ ನೀರೆಗಾಗಿ ಬಹಳಷ್ಟು ಮನೆಗಳಲ್ಲಿ ಸೋಲಾರ್ ವಾಟರ್ ಹೀಟ್ ರಗಳನು ಅಳವಡಿಸಿ ಕೊಳ್ಳ  ಲಾಗಿದೆ .ಇದು ಅಂತಹ ದುಬಾರಿ ಇಲ್ಲದಾದರು   ಅವರವರ ಮನೆಗಳಲ್ಲಿ ಕಡಿಮೆ ವೆಚ್ಚ ಭರಿಸಿ ಅಳವಡಿಸ ಕೊಳ್ಳಬಹುದಾದ ಪರಿಸರ ಸ್ನೇಹಿ ತಂತ್ರಜ್ಞ್ಯಾನ ವಾಗಿದೆ .ಇದರಿಂದ ಸಾರ್ವಜನಿಕರಿಗೆ ಎರಡು ಬಗೆಯ ಪ್ರಯೋಜನವಾಗಲಿದೆ  ಅಲ್ಲದೆ ಕರ್ನಾಟಕ ಸರ್ಕಾರ ದಿಂದ ಪ್ರತಿ ಯುನಿಟ್ಗೆ  ೦.40 ಪೈಸೆ ಯಂತೆ ಗರಿಷ್ಟ ರೂ 50 ನ್ನು ಮಾಸಿಕ ಬಿಲ್ಲಿ ನಲ್ಲಿ  ಕಡಿತ ಗೋಳಿಸ ಲಾಗುತಿದೆ .

 ಇದುವರೆಗೆ ಬೆಂಗಳೂರು ನಗರದಲ್ಲಿ ಸುಮಾರು 15 ಲಕ್ಷ  ಚ. ವೀ . ವಿಸ್ತಿರ್ಣ್ಣ ದಲ್ಲಿ   ಸೋಲಾರ್ ವಾಟರ್ ಹೀಟರ್ ಗಳನ್ನು ಅಳವಡಿಸಿ ಕೊ೦ಡಿರುವದಿಂದ ಪ್ರತಿ 100 ಲೀಟರ್ ನೀರು ಕಾಯಿಸಲು 2  ಚ ವೀ  ಕಲೆ ಕ್ಷರ್  ಪ್ರದೆಶದಂತೆ ದ0ತೆ ,ಇಂತಹ ಒಂದು ವಾಟರ್ ಹೀಟರ್ ಪ್ರತಿನಿತ್ಯ 4  ಯುನಿಟ್  ವಿದ್ಯುತ್ ಉಳಿಸಲು ಸಾಧ್ಯವಾಗಿದ್ದು ಅಂದಾಜಿನ ಪ್ರಕಾರ ಪ್ರತಿ ನಿತ್ಯ 200  ಮೆ ವಾ ವಿದ್ಯುತ್  ಉಳಿತಾಯ ಮಾಡಿದಂತಾಗಿದೆ . ಬೆಂಗಳುರಿನಲ್ಲಿ ಮಳೆಗಾಲದ 2  ತಿಂಗಳು ಮಾತ್ರ  ಮೋಡ ಗಳಿರುವುದರಿಂದ ತುಂಬ ಮೋಡ ಕವಿದಿರುವ ದಿವಸಗಳನ್ನು   ಹೊರೆತು ಪಡಿಸಿದರೆ ವರುಷದ 300  ದಿನಗಳಲಿ ಬಿಸಿ ನೀರು ಪಡೆಯಲು ಯಾವುದೇ ಸಮಸ್ಯ ಇರುವುದಿಲ್ಲ . ಈ ಯಂತ್ರ ಗಳನ್ನು ಮನೆಗಳಲಿ ಅಳವಡಿಸಿಕೊಳುವದರಿಂದ  ಎಲ್ಲಾ ಸರಕಾರಿ ಸೌಮ್ಯದ ಬಾಂಕುಗಳ  ಮೂಲಕ ಶೇ  2  ರ ಬಡ್ಡಿದರದಲ್ಲಿ  ಸಾಲ ದೊರೆಯುತ್ತದೆ .ನಮ್ಮ ಪರಿಸರದಲ್ಲಿ  ಹೇರಳವಾಗಿ ದೊರೆಯುವ ಸೂರ್ಯನ ಬೆಳಕನ್ನು ಮನೆಮನೆಯಲ್ಲಿ ಸೋಲಾರ್  ಫೋಟೋ ವೋಲ್ಟಾಇಕ  ಪನೆಲ್ ಗಳಿಂದ  ವಿದ್ಯುತ್ ಉತ್ಪಾದಿಸಿ ರಾತ್ರಿ ಸಮಯದಲ್ಲಿ ಬೆಳಕನ್ನು ಪಡೆಯಲು ಸಾರ್ವಜನಿಕರು ಪ್ರಯತ್ನಿಸಬೇಕಿದೆ . ಹಗಲಿನ ಸೂರ್ಯನನ್ನು ರಾತ್ರಿ ಬೆಳಗಿಸುವಂತೆ ಮಾಡಿ ,ಕತ್ತಲೆ ಇಂದ  ಬೆಳಕಿನತ್ತ ಮುನ್ನಡೆಯಬೇಕಿದೆ .ಇದಕೆ  ಇಚ್ಚಾಶಕ್ತ್ತಿ ಒಂದಿದರೆ  ಸಾಕು .

ಸೂರ್ಯನ ಬೆಳಕಿನಿಂದ   ವಿದ್ಯುತ್ ಪಡೆಯುವುದು ದುಬಾರಿ ತಂತ್ರಜ್ಞ್ಯಾನವಾಗಿದ್ದು  ಭಾರತ ಇತ್ತೀಚಿಗೆ  ಗೋಷಣೆ ಯಾಗಿರುವ '' ಜವಾಹರ ಲಾಲ್ ರಾಷ್ಟೀಯ ಸೋಲಾರ್ ಮಿಷನ್ ''   ಕಾರ್ಯಕ್ರಮದ ಅಡಿ  ಮನೆಗಳ ಚ್ಚವನಿಯ ಮೇಲೆ ಸೋಲಾರ್ ಪಾನೆಲ್ ಗಳಿಂದ ವಿದ್ಯುತ್ ಉತ್ಪಾದಿಸುವದನ್ನು ಪ್ಪ್ರೋತ್ಸಾಹಿಸಲಾಗುತ್ತಿದೆ . ಸೂರ್ಯನ ಬೆಳಕನ್ನು ಉಪಯೋಗಿಸಿ ಕೊಂಡು ಅಡುಗೆ ತಯಾರಿಸಲು ಸಹ ತಂತ್ರಜ್ಞ್ಯಾನ ಲಭ್ಯವಿದ್ದು  ಈಗಾಗಲೇ ಕೆಲವು ಪುಣ್ಯ ಕ್ಷೇತ್ರ ಗಳಿಗೆ ಬೇಟಿ  ನಿಡುವ ಭಕ್ತಾದಿಗಳಿಗೆ ಅಡುಗೆ ತಯಾರಿಸಲು ದೊಡ್ಡ ಪ್ರಮಾಣದ  ಸೋಲಾರ್  ಥೆರ್ಮಲ್ ಕುಕ್ಕಿಂಗ್ ವ್ಯವಸ್ತೆ ಗಳನ್ನು  ಕರ್ನಾಟಕ ರಾಜ್ಯ ದ  ಶ್ರಿಂಗೇರಿ  ಕ್ಷೇತ್ರ ದಲ್ಲಿ  ತಿರುಪತಿ ತಿರುಮಲ ದೇವಸ್ಥಾನ ದಲ್ಲಿ,  ಮೌಂಟ್ ಅಬು (ರಾಜಸ್ತಾನ) ,ಶಿರಡಿ ಸಾಯಿಬಾಬ ಕ್ಷೇತ್ರ (ಮಹಾರಾಷ್ಟ್ರ) ದಲ್ಲಿ ಅನುಷ್ಠಾನ ಗೊಳಿಸಲಾಗಿದೆ  . ಇಂತಹ ಯೋಜನೆ ಗಳ  ಅನುಷ್ಠಾನಕ್ಕೆ  ಶೇ 40  ರಷ್ಟು ಯೋಜನಾ ವಚ್ಹ ವನ್ನು  ಸರಕಾರವೇ ಬರಿಸುತ್ತದೆ .ಇದೊಂದು ಅತ್ಯಂತ ಸ್ವಚ್ಹ ಹಸಿರಿನ ತಂತ್ರಜ್ಞ್ಯಾನವಾಗಿದ್ದು  ಯಾವುದೇ ಮರಗಳನ್ನು  ಕಡಿದು ಉಪಯೋಗಿಸದೇ  ಪರಿಸರ ಸ್ನೇಹಿ ತಂತ್ರಜ್ಞ್ಯಾನ  ದೊಡ್ಡ ಪ್ರಮಾಣ ದಲ್ಲಿ  ಅಡುಗೆ ತಯಾರು ಮಾಡುವಂತೆ ಹೋಟೆಲ್ ಗಳು  ಕಲ್ಯಾಣ ಮಂಟಪಗಳು  ಆಸ್ಪತ್ರೆಗಳು .ಹಾಗೂ ಪ್ರವಾಸಿ ಸ್ಥಳಗಳಲ್ಲಿ  ಅನುಷ್ಠಾನಗೊಳಿಸುವುದರಿಂದ  ಪರಿಸರ ರಕ್ಷಣೆ  ಮಹತ್ವ ಕಾರ್ಯದಲ್ಲಿ ತೊಡಗಿಸಿ ಕೊಂಡ೦ತಾಗುವುದು .

 ಸೂರ್ಯನ ಬೆಳಕಿನಿಂದ ವಿದ್ಯುತ್ ಅನ್ನು ಪಡೆಯಲು ತಂತ್ರಜ್ಞ್ಯಾನ ದುಬಾರಿಯೇನಿಸಬಹುದಾದರು  ,ನಾವು ಮಾಡುತಿರುವ ವೆಚ್ಚದ  ಬಗ್ಗೆ ಲೆಕ್ಕ ಹಾಕಿದೆರೆ ಅಷ್ಟೇನು ದುಬಾರಿಯೇನಿಸಲಾರದು . ಇಂದು ಸ್ಥಿತಿವಂತರು  ಸೂರ್ಯನ ಬೆಳಕನ್ನು ಉಪಯೋಗಿಸಿ  ವಿದ್ಯುತ್ ಪಡೆದಲ್ಲಿ .ಈ ರೀತಿ ಯಾಗಿ  ಉಳಿತಾಯ ವಾಗುವ  ವಿದ್ಯುತ್ಅನ್ನು ಉತ್ಪಾದನಾ ಕ್ಷೇತ್ರ ಗಳಿಗೆ , ವಿಶೇಷ ವಾಗಿ  ರೈತ  ಸಮುದಾಯಕ್ಕೆ  ಒದಗಿಸದಲ್ಲಿ , ಈ ಕ್ಷೇತ್ರ ದಲ್ಲಿಯ  ಉತ್ಪಾದಕತೆಯನ್ನು  ಹೆಚ್ಹಿಸಿದ  ಕೀರ್ತಿಗೆ  ಕಾರಣ ರಾಗುವರು .ಇಂದು ಎಲ್ಲರೂ ಈ ನಿಟ್ಟಿನಲ್ಲಿ ಯೋಚಿಸಿ ,ಕ್ರ್ಯೊಪ್ನ ಮುಕ ರಾದರೆ  ಇಂದಿನ   ವಿದ್ಯುತ್ ಸಮಸ್ಯೆ ಪರಿಹಾರ ಕಂಡು ಕೊಂಡ ತಾಗುವುದು .
  ಪ್ರಜಾವಾಣಿ ದಿನಪತ್ರಿಕೆ ಯಲ್ಲಿ 13-04-2010  ರಂದು ಪ್ರಕಟವಾದ ಲೇಖನ 

Friday, December 17, 2010

ಉತ್ತರ ಕನ್ನಡ ಜಿಲ್ಲೆಯ ಗೌಳಿ ಜನಾಂಗ ಹಾಗೂ ಶುಚಿತ್ವ

ಕರ್ನಾಟಕದ ಉತ್ತರ ಕನ್ನಡ ಹಾಗೂ ಬೆಳಗಾವಿ ಜಿಲ್ಲೆಗಳ ಘಟ್ಟದ ಮೇಲ್ಭಾಗದ ಅರಣ್ಯಗಳಲ್ಲಿ ಮಹಾರಾಷ್ಟ್ರ ಮೂಲದ ವನವಾಸಿಗಳು ವಾಸಿಸುತ್ತಿರುತ್ತಾರೆ. ಇವರು ಮುಖ್ಯವಾಗಿ ಎಮ್ಮೆಗಳನ್ನು ಸಾಕಿ ಅವುಗಳಿಂದ ಬಂದ ಉತ್ಪನ್ನಗಳಿಂದ ಜೀವನ ಸಾಗಿಸುತ್ತಿದ್ದಾರೆ. ಈ ಜನಾಂಗದವರು ೨೧ನೇ ಶತಮಾನದಲ್ಲಿಯೂ ಸಹ ನಾಗರೀಕತೆಯಿಂದ ಸ್ವಲ್ಪ ದೂರದಲ್ಲಿರುವರೆಂದರೆ ತಪ್ಪಾಗಲಾರದು. ಇವರ ಮೂಲ ಕಸಬು ಎಮ್ಮೆಗಳನ್ನು ಸಾಕುವುದು. ಕಾಡಿನಲ್ಲಿಯೇ ವಾಸಿಸುವ ಈ ಜನಾಂಗದವರು ಎಮ್ಮೆಗಳನ್ನು ಕಾಡಿನಲ್ಲಿ ಬಿಡುತ್ತಾರೆ. ಅವುಗಳು ವಾಪಸ್ ತಾವು ವಾಸಿಸುವ ತಾಣಗಳಾದ ದೊಡ್ಡಿಗಳಿಗೆ ಬಂದಾಗ ಅವುಗಳಿಂದ ಅಲ್ಪ ಸ್ವಲ್ಪ ಹಾಲನ್ನು ಕರೆದು, ಹಾಲನ್ನು ಮಾರಿ ತಮ್ಮ ಜೀವನವನ್ನು ನಡೆಸುತ್ತಿದ್ದಾರೆ. ಇಂದೂ ಸಹ ಈ ಜನಾಂಗದಲ್ಲಿ ಓದಿದವರು ಬಹಳಷ್ಟು ಜನರಿಲ್ಲ. ಅವರಲ್ಲಿ ಹೆಚ್ಚಿನ ಜನರು ಮರಾಠಿ ಮಾತನಾಡುತ್ತಾರೆ. ಈ ಜನರಿರುವ ’ಗೌಳಿ ದೊಡ್ಡಿ’ಗಳಿಗೆ ಸರ್ಕಾರದಿಂದ ಮೂಲಭೂತ ಸೌಕರ್ಯಗಳಾದ ರಸ್ತೆ, ಸುರಕ್ಷಿತ ಕುಡಿಯುವ ನೀರು, ಶಾಲೆಗಳು, ಆರೋಗ್ಯ ವ್ಯವಸ್ಥೆಯನ್ನು ಒದಗಿಸಲು ಹಾಗೂ ಅವರ ಕೌಶಲ್ಯ ಅಭಿವೃದ್ಧಿಗೆ ಪ್ರಯತ್ನಗಳು ಮುಂದುವರಿದಿದೆ. ಆದರೆ, ಜನರಲ್ಲಿ ಅರಿವಿನ ಕೊರತೆಯಿರುವುದರಿಂದ ಇಂತಹ ಪ್ರಯತ್ನಗಳಿಗೆ ಅಷ್ಟೇನು ಸ್ಪಂದಿಸದ ಈ ಜನರು ಇಂದೂ ಸಹ ಕಾಡಿನ ವಾಸಿಗಳಂತೆಯೇ ಜೀವನ ಸಾಗಿಸುತ್ತಿದ್ದಾರೆ. ಈ ಗೌಳಿ ದೊಡ್ಡಿಗಳು ಅರಣ್ಯದ ಮಧ್ಯದಲ್ಲಿರುವ ಅತಿಕ್ರಮಣ ಪ್ರದೇಶಗಳಾಗಿರುವುದರಿಂದ ಸರ್ಕಾರದಿಂದ ಅಭಿವೃದ್ಧಿಪಡಿಸಲು ಸಹ ಸಾಧ್ಯವಾಗುತ್ತಿಲ್ಲ. ಅಭಿವೃದ್ಧಿಪಡಿಸಿ ಕೊಟ್ಟಿರುವ ರಸ್ತೆ ಮತ್ತು ಚರಂಡಿಗಳನ್ನು ಸಹ ಸರಿಯಾಗಿ ನಿರ್ವಹಿಸುತ್ತಿಲ್ಲ. ಈ ಜನಾಂಗದವರು ಕಾಡಿನ ಮಧ್ಯದಲ್ಲಿ ವಾಸಿಸುತ್ತಿರುವುದರಿಂದ ಅಷ್ಟೇನು ಶುಚಿತ್ವದ ಮಹತ್ವವನ್ನು ತಿಳಿಯದ ಇವರ ವೈಯಕ್ತಿಕ ಸ್ವಚ್ಚತೆ ಬಗ್ಗೆ ಕೇಳುವುದೇ ಬೇಕಿಲ್ಲ. ಇವರಿಗೆ ಕಾಡೇ ಶೌಚಾಲಯವಾಗಿದೆ. ಶೌಚಾಲಯವೆಂದರೆ ಏನೆಂದು(ಸಂಡಾಸ) ಕೇಳುವ ಈ ಜನರಿಗೆ ಅರಿವು ಮೂಡಿಸುವಲ್ಲಿ ಸಂಪೂರ್ಣ ಸ್ವಚ್ಛತಾ ಆಂದೋಲನದಲ್ಲಿ ಕೆಲಸ ನಿರ್ವಹಿಸುತ್ತಿರುವ ಸಲಹೆಗಾರರು ಹಾಗೂ ಸರ್ಕಾರದ ವಿವಿಧ ಹಂತದ ಸಿಬ್ಬಂದಿಗಳು ಹರ ಸಾಹಸ ಪಡಬೇಕಾಯಿತು. ಇವರು ವಾಸಿಸುವ ಸ್ಥಳಗಳಾದ ಗೌಳಿ ದೊಡ್ಡಿಗಳಿಗೆ ಭೇಟಿ ನೀಡಿದಂತಹ ವೇಳೆಯಲ್ಲಿ ಮಹಿಳೆಯರಷ್ಟೇ ಇರುತ್ತಿದ್ದರು. ಇವರುಗಳು ಬಹಳ ನಾಚಿಕೆ ಸ್ವಭಾವದವರು. ಇವರುಗಳನ್ನು ಒಂದು ಕಡೆ ಸೇರಿಸಿ, ಮರಾಠಿ ಮಾತನಾಡುವ, ಕನ್ನಡ ಭಾಷೆ ಸರಿಯಾಗಿ ಅರ್ಥವಾಗದ ಇವರಿಗೆ ಶೌಚಾಲಯದ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಮಾಡಲಾಯಿತು. ಮೊದಲು ಭೇಟಿ ನೀಡಿದ ಸಂದರ್ಭದಲ್ಲಿ ಇವರುಗಳಿಗೆ ಮೊದಲ ಪ್ರಶ್ನೆಯಾಗಿ ಕೇಳಿದ್ದು, ನಿಮ್ಮ ಬಂಧುಗಳಾದ ಕೊಲ್ಲಾಪುರದಲ್ಲಿರುವ ನಿಮ್ಮ ಸಂಬಂಧಿಗಳು ಇಲ್ಲಿಗೆ ಏತಕ್ಕಾಗಿ ಬರುತ್ತಿಲ್ಲ. ಆಗ ಅವರು ಯೋಚಿಸಿ, ಯೋಚಿಸಿ ಹೇಳಿದ ಉತ್ತರವೆಂದರೆ ನಮ್ಮಲ್ಲಿ "ಸಂಡಾಸಿಲ್ಲ", ಅದಕ್ಕೋಸ್ಕರ ಅವರು ಬರುತ್ತಿಲ್ಲವೆಂದು. ನಂತರದ ಭೇಟಿಗಳಲ್ಲಿ ಅವರುಗಳಿಗೆ ನಿಮ್ಮ ಸಂಬಂಧಿಕರು ನಿಮ್ಮ ಮನೆಗೆ ಬರುವುದು ಬೇಡವೇ ಎಂದು ಕೇಳಿದಾಗ, ಅವರು ಬರಬೇಕು ಅದಕ್ಕೆ ಸಂಡಾಸು ಬೇಕೆಂದು. ಇಷ್ಟೇ ಅಲ್ಲದೆ ವಯಸ್ಸಿಗೆ ಬಂದಂತಹ ಶಾಲೆಗೆ ಹೋಗುವ ಹೆಣ್ಣುಮಕ್ಕಳಿಂದ ಈ ಜನರಿಗೆ ಅರಿವು ಮೂಡಿಸುವ ಪ್ರಯತ್ನ ಹಾಗೂ ಸರ್ಕಾರದ ವಸತಿ ನಿಲಯಗಳಲ್ಲಿ ವಾಸಿಸುವ ಮಕ್ಕಳಿಂದ ಅವರ ಪೋಷಕರಿಗೆ ತಂದೆ-ತಾಯಿಂದಿರಿಗೆ ಪತ್ರ ಬರೆಯಿಸುವ ಮೂಲಕ ಸಂಡಾಸದ ಮಹತ್ವವನ್ನು ತಿಳಿಸಲು ಪ್ರಯತ್ನ ಬಹಳ ದೊಡ್ಡ ಯಶಸ್ಸನ್ನು ಸಾಧಿಸುವಲ್ಲಿ ಸಹಾಯಕಾರಿಯಾಯಿತು. ಇಂದು ಎಲ್ಲಾ ಗೌಳಿ ದೊಡ್ಡಿಗಳಲ್ಲಿ ಗೌಳಿ ಜನಾಂಗದವರು ಸಂಡಾಸನ್ನು ಕಟ್ಟಿಕೊಂಡು ಬಳಸುತ್ತಿದ್ದಾರೆ. ಅವರೇ ಹೇಳುವಂತೆ "ನಮ್ಮ ಪರಿಸರದಲ್ಲಿ ಶೌಚಾಲಯಗಳಿರಬೇಕು. ಪರಿಸರವೇ ಶೌಚಾಲಯವಾಗಬಾರದೆಂದು.

ಆರ್ಥಿಕವಾಗಿ ಅಷ್ಟೇನು ಸ್ಥಿತಿವಂತರಲ್ಲದ ಈ ಜನರೇ ಶೌಚಾಲಯ ಕಟ್ಟಿಸಿಕೊಳ್ಳುತ್ತಿರುವುದು ನಿಜವಾಗಲೂ ಸ್ವಚ್ಚತಾ ಆಂದೋಲನಕ್ಕೆ ಯಶಸ್ಸಿನ ದಾರಿ ತೋರಿದಂತಾಗಿದೆ. ಈಗ ಮಾದರಿಯಾಗಿರುವ ಗೌಳಿಗಳು ಸ್ವಚ್ಚತಾ ದೂತರಂತೆ ಆಂದೋಲನದ ಮಾರ್ಗದರ್ಶಕರಾಗಿರುವುದು ಮಹತ್ವದ ವಿಚಾರ. ಇದರಿಂದ ಯಲ್ಲಾಪುರ ತಾಲ್ಲೂಕಿನಲ್ಲಿ ಸಂಪೂರ್ಣವಾಗಿ ಪ್ರಗತಿ ಸಾಧಿಸಿ "ನಿರ್ಮಲ ತಾಲ್ಲೂಕ" ಪ್ರಶಸ್ತಿಗೆ ಪ್ರಸ್ತಾವನೆ ಕಳುಹಿಸಲಾಗಿದೆ.

ಉತ್ತರ ಕನ್ನಡ ಜಿಲ್ಲೆ ತೀರ ಪ್ರದೇಶ, ಘಟ್ಟ ಪ್ರದೇಶ ಹಾಗೂ ಬಯಲು ಸೀಮೆಯನ್ನು ಹೊಂದಿರುವುದರಿಂದ ಹಾಗೂ ಜನರ ಸಾಮಾಜಿಕ ಹಾಗೂ ಆರ್ಥಿಕ ಸ್ಥಿತಿಯನ್ನು ಆಧರಿಸಿ ಪ್ರಗತಿ ಸಾಧಿಸಲಾಗಿದೆ. ಇದೇ ಪ್ರಯತ್ನವನ್ನು ಮುಂದುವರಿಸಿ ಜನರ ಸಹಕಾರ, ಸಹಭಾಗಿತ್ವದೊಂದಿಗೆ "ನಿರ್ಮಲ ಜಿಲ್ಲೆ"ಯನ್ನಾಗಿ ಪರಿವರ್ತಿಸುವ ಕಾರ್ಯದಲ್ಲಿ ಸಮಾಜದ ಎಲ್ಲಾ ಸ್ಥರದ ಜನರೂ ಭಾಗೀದಾರರಾಗುವುದು ಅತೀ ಮಹತ್ವದ ವಿಚಾರವಾಗಿದೆ.

ಇಂದು ಬಹಳಷ್ಟು ಜನರು ಅವರವರ ಮನೆಗಳಲ್ಲಿ ಎಲ್ಲಾ ಆಧುನಿಕ ವಸ್ತುಗಳನ್ನು ಅಂದರೆ ಟಿವಿ, ರೇಫ್ರೀಜರೇಟರ್, ಮೊಬೈಲ ಸೆಟ್, ಬೈಕ್ ಇತ್ಯಾದಿಗಳನ್ನು ಹೊಂದಿದ್ದರೂ, ವೈಯಕ್ತಿಕ ಶೌಚಾಲಯ ಹೊಂದುವ ಬಗ್ಗೆ ಇನ್ನೂ ಸಹ ಹೆಚ್ಚಿನ ಆಸಕ್ತಿವಹಿಸದೇ ಇರುವುದು ಅವರ ಚಿಂತನೆಯ ಬಗ್ಗೆ ಹಿಡಿದ ಕನ್ನಡಿಯಾಗಿರುತ್ತದೆ. ಇಂದು ದೇವಾಲಯಕ್ಕೆ ಪ್ರತಿನಿತ್ಯ ಹೋಗುವ ಜನರು ವಿರಳವಿರಬಹುದು. ಆದರೆ ಪ್ರನಿತಿತ್ಯ ಶೌಚಾಲಯಕ್ಕೆ ಹೋಗದೆ ಇರುವವರ ಸಂಖ್ಯೆಯು ಅಷ್ಟೇ ವಿರಳವೆನ್ನುವುದು ಕಟು ಸತ್ಯ. ಇದಕ್ಕಾಗಿಯೇ ಗಾಂಧೀಜೀಯವರು ಎಲ್ಲಾ ಆಲಯಗಳಿಗಿಂತ ಶೌಚಾಲಯ ನಮ್ಮ ದಿನನಿತ್ಯದ ಬದುಕಿನಲ್ಲಿ ಬಹಳ ಮಹತ್ವದ್ದಾಗಿದೆಯೆಂದಿದ್ದರು.

ವಿಶ್ವಸಂಸ್ಥೆಯವರು ಭಾರತದೇಶ ೨೦೧೨ ರ ಸುಮಾರಿಗೆ ಶೇ. ೬೦ ರಷ್ಟು ಶುಚಿತ್ವವನ್ನು ಸಾಧಿಸಬೇಕೆಂದು ತಿಳಿಸಿದೆ. ಇಂದು ಭಾರತದಲ್ಲಿ ವೈಯಕ್ತಿಕ ಶೌಚಾಲಯಗಳ ಪ್ರಮಾಣ ಸರಾಸರಿ ೩೦ ರಷ್ಟಿದೆ. ವಿಶೇಷವಾಗಿ ಗ್ರಾಮಾಂತರ ಪ್ರದೇಶ ಹಾಗೂ ಪಟ್ಟಣಗಳಲ್ಲಿರುವ ಕೊಳಚೆ ಪ್ರದೇಶಗಳಲ್ಲಿ ಶೌಚಾಲಯದ ನಿರ್ಮಾಣ ಹಾಗೂ ಬಳಕೆಯ ಬಗ್ಗೆ ಆಧ್ಯತೆಯನ್ನು ನೀಡಬೇಕಾಗಿದೆ. ಇದರಿಂದ ಆಯಾ ಪ್ರದೇಶಗಳಲ್ಲಿ ಉಂಟಾಗಬಹುದಾದ ಸಾಂಕ್ರಾಮಿಕ ರೋಗಗಳು, ಅಶುಚಿತ್ವದಿಂದ ಬರುವ ಖಾಯಿಲೆಗಳನ್ನು ನಿಯಂತ್ರಿಸುವಲ್ಲಿ ಮಹತ್ತರ ಪಾತ್ರವಹಿಸಬಲ್ಲದು. ಇದರಿಂದ ಪರಿಸರ ರಕ್ಷಣೆ ಹಾಗೂ ಜಲಮೂಲಗಳ ಮಾಲಿನ್ಯವನ್ನು ತಡೆಗಟ್ಟಲು ಸಹಕಾರಿಯಾಗುತ್ತದೆ.

Thursday, December 16, 2010

ತಾಪಮಾನ ನಿಯಂತ್ರಣಕ್ಕೆ 'ಗ್ರೀನ್ ಪವರ್ '

ಮನುಷ್ಯನ ಬದುಕಿನ ಅವಿಭಾಜ್ಯ ಅಂಶ ’ಪವರ್’. ಈ ಪವರ್ ಅಥವಾ ’ಶಕ್ತಿ’ ಮಾನವನ ಇಂದಿನ ಎಲ್ಲಾ ಚಟುವಟಿಕೆಗಳಿಕೆ ಅತಿ ಮುಖ್ಯವಾದದ್ದು. ಇಂದು ಈ ಶಕ್ತಿಯನ್ನು ಇಂಧನಗಳಿಂದ ಪಡೆಯುತ್ತಿದ್ದೇವೆ. ವಿದ್ಯುತ್ತನ್ನು ಸಹ ಇಂಧನ ಮೂಲಗಳನ್ನು ಉಪಯೋಗಿಸಿ ಪಡೆಯಲಾಗುತ್ತಿದೆ.ಈಗಿನ ದಿನಗಳಲ್ಲಂತು ವಿದ್ಯುತ್ ಇಲ್ಲದೆ ಬದುಕನ್ನು ಸಾಗಿಸುವುದು ಕಷ್ಟವಾಗಬಹುದು. ಸಾಂಪ್ರದಾಯಿಕ ರೀತಿಯಲ್ಲಿ ವಿದ್ಯುತ್ತನ್ನು ಉಷ್ಣಸ್ಥಾವರ, ಅಣುಶಕ್ತಿ, ಅನಿಲ ಮತ್ತು ಕಲ್ಲೆಣ್ಣೆಯ ಸ್ಥಾವರಗಳಿಂದ ಹಾಗೂ ಜಲ ವಿದ್ಯುತ್ ಘಟಕಗಳಿಂದ ಉತ್ಪಾದಿಸಲಾಗುತ್ತಿದೆ. ಇದರಿಂದ ಸ್ವಾಭಾವಿಕ ಪರಿಸರಕ್ಕೆ ಸಾಕಷ್ಟು ಹಾನಿಯುಂಟುಮಾಡಿದ್ದಲ್ಲದೆ, ಭವಿಷ್ಯದಲ್ಲಿ ಬರಿದಾಗುವಂತಹ ಇಂಧನಗಳನ್ನು ಉಪಯೋಗಿಸಿ ವಿದ್ಯುತ್ ಉತ್ಪಾದಿಸುತ್ತಿರುವುದು, ಮುಂಬರುವ ವರ್ಷಗಳಲ್ಲಿ ವಿದ್ಯುತ್ ಉತ್ಪಾದನಾ ಕ್ಷೇತ್ರದಲ್ಲಿ ಗಂಭೀರವಾದ ಪರಿಣಾಮವನ್ನು ಬೀರಲಿದೆ.

ಸಾಂಪ್ರದಾಯಿಕ ಮೂಲಗಳಿಂದ ವಿದ್ಯುತ್ ಪಡೆಯಲು ಪರಿಸರವನ್ನು ಹಾಗೂ ಸಾಕಷ್ಟು ಅರಣ್ಯ ಪ್ರದೇಶಗಳನ್ನು ಮುಳುಗಡೆಗೊಳಿಸಿ, ಜಲ ವಿದ್ಯುತ್‌ಗಾಗಿ ಬೃಹತ್ ಅಣೆಕಟ್ಟೆಗಳನ್ನು ನಿರ್ಮಿಸಿ ವಿದ್ಯುತ್ತನ್ನು ಪಡೆಯುತ್ತಿದ್ದೇವೆ. ಇದು ಅನಿವಾರ್ಯವಾಗಿತ್ತು. ನೆಮ್ಮೆಲ್ಲಾ ಅಭಿವೃದ್ಧಿಗೆ ವಿದ್ಯುತ್ ಅತ್ಯಾವಶ್ಯಕ ಹಾಗೂ ಅಭಿವೃದ್ಧಿಯನ್ನು ಸಾಧಿಸುವಲ್ಲಿ ಪರಿಸರಕ್ಕೆ ಹಾನಿಯುಂಟು ಮಾಡುವುದು ಸಹ ಸಹಜವಾದದ್ದೆ.

ಆದರೆ ಇನ್ನಷ್ಟು ಪರಿಸರವನ್ನು ನಾಶಪಡಿಸಿ ವಿದ್ಯುತ್ ಪಡೆಯಬೇಕಂದು ಯೋಚಿಸಬೇಕಿದೆ. ಹಾಗು ಎಲ್ಲ ಪ್ರಜ್ಞ್ಯಾವಂತರು ಚರ್ಚಿಸಬೇಕಾದ ಮಹತ್ವದ ವಿಷಯ ನಮ್ಮ ಅಭಿವೃದ್ಧಿ ಸುಸ್ಥಿರವಾಗಿರಬೇಕಾದರೆ , ಸುಸ್ಥಿರ ಪರಿಸರ ಅವಶ್ಯಕತೆಯ ಬಗ್ಗೆ  ಚಿಂತಿಸಬೇಕಿದೆ. ಇಂದು ಅರ್ಥಿಕ ಭದ್ರತೆ ಪರಿಸರ ಭದ್ರತೆ ಹಾಗು ಇಂಧನ ಭದ್ರತೆ ಬಗ್ಗೆ ಯೋಚಿಸಿ ಯೋಜಿಸುವ  ಕಾಲವಿದು. ಇಧನ್ನು ಅಂಗ್ಲ ಬಾಷೆಯಲ್ಲಿ  '3E 's ಎಂದು ಗುರುತಿಸಲಾಗಿದೆ (Energy, Ecology, Economy) ಈ ಮೂರು ಅಂಶಗಳು ಇಂಧನ ಅಭಿವೃದ್ಧಿಯಲ್ಲಿ ಅಳವಡಿಸಬೇಕಾಗಿದ್ದು ಅವು ಒಂದ್ದೆಕ್ಕೊಂದು ತೆಕ್ಕೆ ಹಾಕಿಕೊಂಡಿವೆ. ಇದನ್ನು ಗಮನಿಸಿದಾಗ ಯಾವುದೇ ಅಭಿವೃದ್ಧಿ ಪರಿಸರದ ಜೊತೆ ಜೊತೆಗೆ  ಒಂದು ಮತ್ತೊಂದನ್ನು ನಾಶಪಡಿಸದೆ, ನಾಶಪಡಿಸಿದರು ಕನಿಷ್ಠ ಪ್ರಮಾಣದಲ್ಲಿ ಪರಿಸರಕ್ಕೆ ಧಕ್ಕೆ ಉಂಟುಮಾಡಿದಲ್ಲಿ ದಲ್ಲಿ ಮಾತ್ರ ಸುಸ್ಥಿರತೆಯನ್ನು ತರಲು ಸಾಧ್ಯವಾಗಬಹುದು. ಆದುದರಿಂದ ಇಂದು ವಿದ್ಯುತ್ ಉತ್ಪಾದನ ಕ್ಷೇತ್ರದಲ್ಲಿ ಸಹ ಪರಿಸರಕ್ಕೆ ಕನಿಷ್ಠ ಹಾನಿ ಉಂಟುಮಾಡುವ ನವೀಕರಿಸಬಹುದಾದ  , ಪರಿಸರದಲ್ಲಿ ಹೇರಳವಾಗಿ ದೊರಯುವ ಮೂಲಗಳಾದ ಸೂರ್ಯನ ಶಕ್ತಿಯನ್ನು ಗಾಳಿಯ ಶಕ್ತಿಯನ್ನು ಹಾಗು ಸಣ್ಣ ಸಣ್ಣ ಜಲ ವಿದ್ಯುತ್ ಘಟಕಗಳಿಂದ ವಿದ್ಯುತ್ ಪಡಯಬಹುದಾಗಿದೆ . ಇವುಗಳ ಉತ್ಪಾದನೆಯಿಂದ ಪರಿಸರ ಮಾಲಿನ್ಯ ವಾಗಲಿ, ಭೂತಾಪಮಾನ ಏರಿಕೆಯಾಗಲಿ ,ಹಸಿರು ಮನೆ ಅನಿಲಗಳಾದ ಇಂಗಾಲದ  ಡೈ ಕ್ಸೈಡ್   ಮೀತೆನ್ ಅಥವಾ ನೈಟ್ರಸ್ ಆಕ್ಸೈಡ್ ಗಳನ್ನಾಗಲಿ  ವಾತಾವರಣಕ್ಕೆ ಸೇರಿಸುವುದಿಲ್ಲ, ಇಂತಹ ಯಾವುದೆ ಕ್ರಿಯೆ, ಚಟುವಟಿಕೆ ಅಥವಾ ಅಭಿವೃದ್ಧಿಯಿಂದ ಹಸಿರುಮನೆ ಅನಿಲಗಳು  ಸೇರ್ಪದೆಯಾಗುವುದಿಲ್ಲವೋ ಅಂತಹ ವಿದ್ಯುತ್ ಉತ್ಪಾದನೆಯನ್ನು ಹಸೀರು ವಿದ್ಯುತ್ (ಗ್ರೀನ್ ಪವರ್ )ಹಾಗು ಸ್ವಚ್ಚ್ಹ ಅಭಿವೃದ್ಧಿ ತಂತ್ರಜ್ಞ್ಯಾನವೆಂದು ಕರೆಯಲಾಗುತ್ತೆದೆ. ಈ ಹಸಿರು ಅಥವಾ ಗ್ರೀನ್ ಎನ್ನುವ ಪದವನ್ನು ಸಸ್ಯಗಳಿಂದ ಪದಯಲಾಗಿದೆ, ಏಕೆಂದರೆ ಕೇವಲ ಬಣ್ಣದಿಂದ ಹಸಿರಾಗುವುದಲ್ಲ. ಹಸಿರು ಮನೆ ಅನೀಲಗಳ ಹೊರಸೂಸುವಿಕೆಯನ್ನು ಕಡಿಮೆಗೊಳಿಸುವ ತಂತ್ರಜ್ಞ್ಯಾನವನ್ನುಸ್ವಚ್ಚ್ಹ ಅಭಿವೃದ್ಧಿ ತಂತ್ರಜ್ಞ್ಯಾನದಿಂದ (ಕ್ಲೀನ್ ಡೇವ್ಲೋಪ್ಮೆಂಟ  ಮೆಕಾನಿಸಂ) ಕರೆಯಲ್ಪಟ್ಟಿದೆ. ಇಂತಹ ತಂತ್ರಜ್ಞ್ಯಾನದಿಂದ ಉತ್ಪಾದನೆಯಾಗುವ ವಸ್ತುಗಳಾಗಬಹುದು  , ಚಟುವಟಿಕೆಯಿರಬಹುದು ಇಂತಹದಕ್ಕೆ ಹಸಿರು ಪದವನ್ನು ಸೇರಿಸಿ ಬಳಕೆ ಯಲ್ಲಿ ತರಲಾಗಿದೆ. ಉದಾ: ಹಸಿರು  ವಿದ್ಯುತ್, ಹಸಿರು ಅಭಿವೃದ್ಧಿ, ಹಸಿರು ಸಾರಿಗೆ ..ಇತ್ಯಾದಿಗಳು

ಇಂಧನ ಉಳಿತಾಯ: ೧. ನವೀಕರಿಸಬಹುದಾದ ಇಂಧನ ಬಳಕೆ ಹಾಗೂ ಇಂಧನ ಉಳಿತಾಯ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ "ಒಂದು ಯೂನಿಟ್ ವಿದ್ಯುತ್ ಉಳಿತಾಯ ಎರಡು ಯೂನಿಟ್ ವಿದ್ಯುತ್ ಉತ್ಪಾದನೆಗೆ ಸಮ" ಎನ್ನುವ ನಾಣ್ಣುಡಿಯನ್ನು ಸಾಕಾರಗೊಳಿಸಬೇಕಾದುದು ಇಂದಿನ ದಿನಮಾನಗಳಲ್ಲಿ ಬಹಳ ಮುಖ್ಯ. ನಮ್ಮ ರಾಷ್ಟ್ರದ ಒಟ್ಟು ವಿದ್ಯುತ್ ಬಳಕೆಯಲ್ಲಿ ಶೇ. ೨೦ರಷ್ಟು ಬೆಳಕಿಗಾಗಿಯೇ ವ್ಯಯವಾಗುತ್ತಿದೆ. ರಾಷ್ಟ್ರದಲ್ಲಿ ಒಟ್ಟು ಉತ್ಪಾದಿಸಲಾಗುತ್ತಿರುವ ೧೫೦೦೦೦ ಮೆ.ವಾ. ವಿದ್ಯುತ್‌ನಲ್ಲಿ ಇಂಧನ ಉಳಿತಾಯ ಒಂದರಿಂದಲೇ ಶೇ. ೨೫ರಷ್ಟು ವಿದ್ಯುತ್ ಉಳಿಸಲು ಸಾಧ್ಯವಾಗುವುದು. ಕನಿಷ್ಠ ೨೫೦೦೦ ದಿಂದ ೩೦೦೦೦ ಮೆ.ವಾ. ವಿದ್ಯುತ್ ಉಳಿಸಬಹುದೆಂದು ಅಂದಾಜಿಸಲಾಗಿದೆ.

೨. ವಿದ್ಯುತ್ ಉಳಿತಾಯ ನಮ್ಮ ಜೀವನ ಶೈಲಿಯ ಮೇಲೆ ಅವಲಂಬಿತವಾಗಿದೆ ಸಾಮಾನ್ಯವಾಗಿ, ಹೆಚ್ಚಿನ ಬೆಳಕು ಹಾಗೂ ಗಾಳಿ ಇರುವ ಮನೆಗಳಲ್ಲಿ ಹಗಲಿನ ಸಮಯದಲ್ಲಿ ವಿದ್ಯುತ್ ಬಳಕೆಯ ಅವಶ್ಯಕತೆ ಬರುವುದಿಲ್ಲ. ಆದರೆ ಆಧುನಿಕ ಜೀವನ ಶೈಲಿಯಲ್ಲಿ ಪ್ರಾಕೃತಿಕ ಬೆಳಕಿಗೆ ತಡೆಒಡ್ಡಿ ಬೆಳಕು ಮತ್ತು ಗಾಳಿಯಿಂದ ವಂಚಿತರಾಗಿದ್ದೇವೆ. ಇದರ ಜೊತೆಗೆ ಹವಾ ನಿಯಂತ್ರಣಕ್ಕಾಗಿಯಾದರೂ ಸ್ವಾಭಾವಿಕ ಗಾಳಿ ಮತ್ತು ಬೆಳಕಿಗೆ ನಿರ್ಬಂಧವೇರಿ ಕೃತಕ ಬೆಳಕಿಗಾಗಿ ವಿದ್ಯುತ್ ಬಳಸುತ್ತಿದ್ದೇವೆ. ಇತ್ತೀಚಿಗಂತೂ ಪಟ್ಟಣ ಪ್ರದೇಶಗಳ ಮನೆಗಳ ಮಧ್ಯದಲ್ಲಿ ಹೆಚ್ಚಿನ ಸ್ಥಳವನ್ನು ಬಿಡದೇ ಕಟ್ಟುತ್ತಿರುವುದು ಸಹ ಸ್ವಾಭಾವಿಕ ಬೆಳಕಿನಿಂದ ವಂಚಿತರಾಗಲು ಕಾರಣವಾಗಿದೆ. ಜನ ಸಾಮಾನ್ಯರು ಈ ನಿಟ್ಟಿನಲ್ಲಿ ಯೋಚಿಸಿ ಎಚ್ಚರಿಕೆ ಕ್ರಮ ವಹಿಸುವುದು ಸೂಕ್ತ.

೩. ಬೆಳಕಿನ ಅವಶ್ಯಕತೆಯಿದ್ದಾಗ ಮಾತ್ರ ವಿದ್ಯುತ್ ಬಳಸುವುದನ್ನು ಮನೆಗಳಲ್ಲಿ ಮಕ್ಕಳಿಗೆ ತಿಳಿಸುವುದು ತಂದೆ-ತಾಯಿಗಳ ಮತ್ತು ಸಮಾಜದ ಜವಾಬ್ದಾರಿಯಾಗಬೇಕಾಗಿದೆ. ಅನ್ನವನ್ನು ವ್ಯರ್ಥ ಮಾಡಬಾರದು, ನೀರನ್ನು ಮಿತವಾಗಿ ಬಳಸಬೇಕು ಎಂದು ಹೇಳುವ ಸಂದರ್ಭದಲ್ಲಿ ಇವೆರಡನ್ನು ಪಡೆಯಲು ಸಹಕಾರಿಯಾಗಿರುವ ವಿದ್ಯುತ್ ಉಳಿತಾಯದ ಬಗ್ಗೆ ಗಮನಹರಿಸುವುದೂ ಸಹ ಅಷ್ಟೇ ಪ್ರಾಮುಖ್ಯವಾದದ್ದಾಗಿದೆ.

೪. ವಿದ್ಯುತ್ ಬಳಸುವ ಎಲ್ಲಾ ಗ್ರಾಹಕರು ಇನ್ ಕ್ಯಾಂಡಸೆಂಟ್ ದೀಪ (ಬುರುಡೆಬಲ್ಬ್) ಬದಲಿಗೆ ಕಾಂಪ್ಯಾಕ್ಟ್ ಫ಼್ಲೋರೋಸೆಂಟ್ ಹಾಗೂ ಎಲ್.ಇ.ಡಿ. ದೀಪಗಳನ್ನು ಉಪಯೋಗಿಸುವುದು ಸೂಕ್ತ. ಸಿ.ಎಫ಼್.ಎಲ್. ಬಲ್ಬ್‌ಗಳ ಶೇ. ೭೫ ರಷ್ಟು ವಿದ್ಯುತ್ ಬಳಸಿ ಐ.ಸಿ.ಎಲ್. ಬಲ್ಬ್‌ಗಳು ನೀಡುವ ಪ್ರಮಾಣದ ಬೆಳಕನ್ನು ನೀಡುತ್ತವೆ.

ಮನೆ-ಮನೆಗಳಲ್ಲಿ ಸಿ.ಎಫ಼್.ಎಲ್. ಬಳಕೆಯಿಂದ ಶೇ. ೨೫ ರಷ್ಟು ವಿದ್ಯುತ್ ಉಳಿಸಿ ಮನೆಗಳ ವಿದ್ಯುತ್ ಬಿಲ್ ಕಡಿಮೆಗೊಳಿಸಬಹುದು. ಹಾಗೂ ಹೆಚ್ಚು ವಿದ್ಯುತ್ ಬಳಸುವ ಪ್ರದೇಶಗಳಲ್ಲಿ ಶೇ. ೨೫ ರಷ್ಟು ಸಂಖ್ಯೆಯಷ್ಟು ಸಿ.ಎಫ಼್.ಎಲ್. ಬಳಸುವುದರಿಂದ ಶೇ. ೫೦ ರಷ್ಟು ವಿದ್ಯುತ್ ಬಿಲ್ ಕಡಿಮೆಗೊಳಿಸಬಹುದು.

೫. ಮತ್ತೊಂದು ವಿಧಾನವೆಂದರೆ, ಸೋಲಾರ್ ವಾಟರ್ ಹೀಟರ್‌ಗಳ ಬಳಕೆ ಸೂರ್ಯನ ಬೆಳಕನ್ನು ಉಪಯೋಗಿಸಿ ನೀರನ್ನು ಬಿಸಿಮಾಡುವ ಉಪಕರಣವೇ ಸೋಲಾರ್ ವಾಟರ್ ಹೀಟರ್. ಬಿಸಿನೀರನ್ನು ಮನೆಗಳಲ್ಲಿ ಸ್ನಾನ ಮಾಡಲು ಮತ್ತು ಇತರೆ ಗೃಹಬಳಕೆಗೆ ಉಪಯೋಗಿಸಲಾಗುತ್ತಿದೆ.

೧೦೦ ಲೀ ಸಾಮರ್ಥ್ಯದ ಒಂದು ಸೋಲಾರ್ ವಾಟರ್ ಹೀಟರ್ ೫ ಜನರ ಕುಟುಂಬಕ್ಕೆ ಸಾಕಾಗುತ್ತದೆ. ಇದರ ಉಪಯೋಗದಿಂದ ಮನೆಗಳಲ್ಲಿ ಪ್ರತೀ ನಿತ್ಯ ೩ ಕಿ.ವಾ. ವಿದ್ಯುತ್  ಉಳಿತಾಯ  ಮಾಡಬಹುದು ಹಾಗೂ ವಾರ್ಷಿಕವಾಗಿ ೧೫೦೦ ಕಿ.ವಾ. ವಿದ್ಯುತ್ ಉಳಿಸಬಹುದಾಗಿದೆ. ಇವುಗಳನ್ನು ಮನೆಗಳಲ್ಲಿ ಅಳವಡಿಸಲು ತಗಲುವ ವೆಚ್ಚವನ್ನು ಮೂರರಿಂದ ಐದು ವರ್ಷಗಳಲ್ಲಿ ಹಿಂಪಡೆಯಬಹುದು. ನಂತರದ ವರ್ಷಗಳಲ್ಲಿ ಉಚಿತವಾಗಿ ಅಂದರೆ ಸುಮಾರು ೧೫-೨೦ ವರ್ಷಗಳು ಪಡೆಯಬಹುದಾಗಿದೆ.

ಸೋಲಾರ್ ವಾಟರ್ ಹೀಟರ್‌ಗಳನ್ನು ಮನೆಗಳ ಚಾವಣಿಯ ಮೇಲೆ ಅಳವಡಿಸುವುದು ಸೂಕ್ತ. ಒಂದುವೇಳೆ ಸ್ಥಳದ ಅಭಾವವಿದ್ದಲ್ಲಿ ಕಿಟಕಿಗಳ ಸಮೀಪ ಸಹ ಅಳವಡಿಸಬಹುದು. ಇವುಗಳ ನಿರ್ವಹಣೆ ಸುಲಭವಾಗಿದ್ದು ಅಳವಡಿಸಲು ೨ ಚ.ಮೀ. ಸ್ಥಳಾವಕಾಶ ಬೇಕಾಗುತ್ತದೆ. ೧೦೦ ಲೀಟರ್ ಸಾಮರ್ಥ್ಯದ ಸೋಲಾರ್ ವಾಟರ್ ಹೀಟರ್‌ನ ಬೆಲೆ ಮಾರುಕಟ್ಟೆಯಲ್ಲಿ ರೂ. ೧೮೦೦೦/- ದಿಂದ ರೂ. ೨೫೦೦೦/- ಇವುಗಳನ್ನು ಅಳವಡಿಸಲು ತಗಲುವ ಪ್ರಾರಂಭಿಕ ವೆಚ್ಚವನ್ನು ಸರಿದೂಗಿಸಲು ಶೇ. ೫ ರಷ್ಟರ ಸರಳಬಡ್ಡಿ ದರದಲ್ಲಿ ಸಾಲದ ಸೌಲಭ್ಯವನ್ನು ಯಾವುದೇ ರಾಷ್ಟ್ರೀಕೃತ ಬ್ಯಾಂಕುಗಳಿಂದ ಪಡೆಯಬಹುದು.ಇದರ ಜೊತೆಗೆ ರಾಜ್ಯ ಸರ್ಕಾರದಿಂದ ಮಾಸಿಕವಾಗಿ ಪ್ರತಿ ಯೂನಿಟ್‌ಗೆ ವಿದ್ಯುತ್ ಬಳಕೆಯ ಮೇಲೆ ರೂ. ೫೦ ಪೈಸೆಯಂತೆ ರೂ. ೫೦/- ಮಾಸಿಕ ಬಿಲ್‌ನಿಂದ ಕಡಿತಗೊಳಿಸಲಾಗುತ್ತಿದೆ. ಇಂದು ಇವುಗಳ ಬಳಕೆಯನ್ನು ರಾಜ್ಯ ಸರ್ಕಾರ ಕಡ್ಡಾಯಗೊಳಿಸಿದೆ.

ಸೋಲಾರ್ ವಾಟರ್ ಹೀಟರ್‌ನ್ನು ಆಸ್ಪತ್ರೆಗಳು, ನರ್ಸಿಂಗ್ ಹೋಂಗಳು, ಹೋಟೆಲ್‌ಗಳು, ಮಾಲ್‍ಗಳು, ವಸತಿ ನಿಲಯಗಳು ಕ್ಯಾಂಟೀನ್‌ಗಳು, ವಸತಿ ಶಾಲೆಗಳು ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಅಳವಡಿಸುವುದರಿಂದ ಗಣನೀಯವಾಗಿ ವಿದ್ಯುತ್ ಉಳಿಸಬಹುದಾಗಿದೆ.
ಜೊತೆಗೆ ಅಂತಹ ಸಂಸ್ಥೆಗಳ ವಿದ್ಯುತ್ ಬಿಲ್‌ಗಳು ಸಹ ಕಡಿಮೆಯಾಗುತ್ತದೆ. ಇಂತಹ ಸಂಸ್ಥೆಗಳಿಗೆ ಪ್ರತಿ ಚ.ಮೀ.ಗೆ ರೂ. ೧೭೫೦/- ಸರ್ಕಾರದಿಂದ ಸಹಾಯಧನ ಲಭ್ಯವಿದೆ. ಹೌಸಿಂಗ್ ಕಾಂಪ್ಲೆಕ್ಸ್‌ಗಳಿಗೂ ರೂ. ೧೯೦೦ ಚ.ಮೀ.ಗೆ ಪಡೆಯಬಹುದು.

ಇಂಧನ ಉಳಿತಾಯ ಹಾಗೂ ನವೀಕರಿಸಬಹುದಾದ ಇಂಧನ ಮೂಲಗಳ ಬಳಕೆ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಒಂದು ಮತ್ತೊಂದಕ್ಕೆ ಪೂರಕವಾಗಿ ಕಾರ್ಯ ನಿರ್ವಹಿಸುವುದರಿಂದ ಹಾಗೂ ವಾತಾವರಣಕ್ಕೆ ಯಾವುದೇ ರೀತಿಯ ಇಂಗಾಲ ಆಮ್ಲದ ಹೊರ ಸೂಸುವಿಕೆಯಿಲ್ಲದೇ ಇರುವುದು ಮಹತ್ವದ ವಿಚಾರವಾಗಿದ್ದು, ಕಡಿಮೆ ಇಂಗಾಲ ಅಥವಾ ಲೋ ಕಾರ್ಬನ್ ತಾಂತ್ರಿಕತೆಯಾಗಿದೆ.
ಇಂದು ವಿಶ್ವವ್ಯಾಪಿ ೮ ಬಿಲಿಯನ್ ಟನ್ ಇಂಗಾಲ ಆಮ್ಲ ಉತ್ಪತ್ತಿಯಾಗುತ್ತಿದ್ದು, ನಮ್ಮ ಭೂಮಿಯು ಕೇವಲ ೩.೧ ಬಿಲಿಯನ್ ಟನ್ ಕಾರ್ಬನ್ ಡೈ ಆಕ್ಸೈಡ್ ಹೀರಿಕೊಳ್ಳುವ ಸಾಮರ್ಥ್ಯ ಹೊಂದಿದೆ. ಈ ರೀತಿಯಾಗಿ ಬಾಕಿ ಉಳಿಯುವ ಇಂಗಾಲ ಆಮ್ಲ ನಮ್ಮ ವಾತಾವರಣದಲ್ಲಿ ಶೇಖರಗೊಂಡು ಭೂ ತಾಪಮಾನ ಏರಿಕೆಗೆ ಕಾರಣವಾಗುತ್ತಿದೆ.
(ಪ್ರಜಾವಾಣಿ ದಿನಪತ್ರಿಕೆಯಲ್ಲಿ  14-05-2010 ಪ್ರಕಟವಾದ ಲೇಖನ )